Friday, August 12, 2011

ಜಯತೇ ಜಯತೇ ಸತ್ಯಮೇವ ಜಯತೇ

ಜಯತೇ ಜಯತೇ ಸತ್ಯಮೇವ ಜಯತೇ

ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ
ಬೆಳೆಸಿ ನೋವ ಅಳಿಸಿ ನಲಿವ ಆಗಬೇಡ ದಾನವ
ಕೆಡುಕ ಬಯಸೆ ಕೆಡುವೆ ಖಚಿತ, ಪಡೆವೆ ನೋವ ಖಂಡಿತ
ಸತ್ಯವಾದ ಘನತೆ ಸೋಲೇ ಕಾಣದಂತೆ ಜಯತೇ

ಆಸೆ ಫಲಿಸದೇನು ಎಂದು ಅಲುಕಲೇಕೆ ಅಳ್ಳೆದೆ
ಅಂತರಂಗದಲ್ಲೇ ಇರುವ ಅಂತರಾತ್ಮ ಕಾಣದೆ
ಆತ್ಮಶಕ್ತಿಗಿಂತ ಬೇರೆ ಕಲ್ಪವೃಕ್ಷ ಎಲ್ಲಿದೆ ?


ಸತ್ಯವಾದ ಘನತೆ ಸೋಲೇ ಕಾಣದಂತೆ ಜಯತೇ

No comments: